Shri Siddharoodha Swamiji Math Trust Committee

Hubballi

www.srisiddharoodhaswamiji.in

15 ನೇ ವರ್ಷದ “ಭಗವಚ್ಚಿಂತನ ಸಾಧನ ಶಿಬಿರ”ದ ಸಮಾರೋಪ ಸಮಾರಂಭ
Date : 02-08-2024
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ದಿನಾಂಕ: 07.07.2024 ರಿಂದ 02.08.2024 ರವರೆಗೆ ನಡೆದ ಭಗವಚ್ಚಿಂತನ ಸಾಧನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವನ್ನು ಶ್ರೋ.ಬ್ರ ಸದ್ಗುರು ಸಹಜಯೋಗಿ ಶ್ರೀ ಸಹಜಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ಸಿದ್ಧಾರೂಢರ ದರ್ಶನ ಪೀಠ, ಚಿಕ್ಕನಂದಿ- ಮಹಾಲಿಂಗಪೂರ ಆಶೀರ್ವಚನವನ್ನು ನೀಡಿದರು, ಹುಬ್ಬಳ್ಳಿಯ ಶ್ರೀಮಠದಲ್ಲಿ ಸತತವಾಗಿ ಹದಿನಾರು ವರ್ಷಗಳ ಪರಿಯಂತರವಾಗಿ ಭಗವಚ್ಚಿಂತನ ಸಾಧನ ಶಿಬಿರ ನಡೆಯಿಸಿಕೊಂಡು ಬಂದಿದ್ದು ಅತ್ಯಂತ ಶ್ಲಾö್ಯಘನೀಯವಾದ ವಿಷಯವಾಗಿದೆ, ಏಕೆಂದರೆ ಇತ್ತೀಚಿನ ದಿನಮಾನಗಳಲ್ಲಿ ಬೇರೆ ಬೇರೆ ವಿಷಯಗಳ ಚಿಂತನೆ ಮಾಡುವ ಶಿಬಿರಗಳು ಸಾಕಷ್ಟು ನಡೆಯುತ್ತವೆ, ಆದರೆ ಸರ್ವ ಜೀವಿಗಳ ಆತ್ಮ ಸ್ವರೂಪಿಯಾದ ಭಗವಂತನ ಚಿಂತನೆ ನಡೆಯುವುದು ಅತೀ ವಿರಳ, ಇಂತಹದರಲ್ಲಿ ಶ್ರೀಮಠದಿಂದ ಹದಿನಾರು ವರ್ಷಗಳವರೆಗೆ ಭಗವಚ್ಚಿಂತನ ಸಾಧನ ಶಿಬಿರ ನಡೆಯಿಸಿ ಶಿಬಿರಾರ್ಥಿಗಳಿಗೆ ವಿಚಾರ ಸಾಗರ, ಪಾರಮಾರ್ಥಗೀತೆ, ಸಿದ್ಧಾರೂಢರ ಚರಿತ್ರೆ ಹಾಗೂ ಶ್ರೀಮನ್ ನಿಜಗುಣ ಸ್ವಾಮಿಗಳ ಶಾಸ್ತç ಮುಂತಾದ ಗ್ರಂಥಗಳನ್ನು ಅಧ್ಯಯನ ಮಾಡಿಕೊಳ್ಳಲಿಕ್ಕೆ ಅನುಕೂಲ ಮಾಡಿಕೊಟ್ಟ ಶ್ರೀಮಠದ ಎಲ್ಲಾ ಧರ್ಮದರ್ಶಿಗಳಿಗೆ ಸಿದ್ಧಾರೂಢರ ಕೃಪಾಶೀರ್ವಾದ ಇರಲೆಂದು ಹೃದಯ ತುಂಬಿ ಹಾರೈಸಿದರು. ನೇತೃತ್ವವನ್ನು ಶ್ರೋ.ಬ್ರ. ಸದ್ಗುರು ಶ್ರೀ ಬಸವರಾಜ ಮಹಾಸ್ವಾಮಿಗಳು, ಶಿವಾನಂದ ಆಶ್ರಮ, ರನ್ನತಿಮ್ಮಾಪೂರ ಹಾಗೂ ಸಮ್ಮುಖ ಸ್ಥಾನವನ್ನು ಶ್ರೋ.ಬ್ರ. ಸದ್ಗುರು ಯೋಗಿರಾಜ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ ಹಾಗೂ ಮಾತೋಶ್ರೀ ಶಶಿಕಲಾ ಮಾತಾ ಇವರುಗಳು ವಹಿಸಿದ್ದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮಠದ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಸವರಾಜ ಕಲ್ಯಾಣ ಶೆಟ್ಟರ ಇವರು ವಹಿಸಿದ್ದರು. ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ ಇವರು ಎಲ್ಲ ಪೂಜ್ಯರನ್ನು ಹಾಗೂ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು. ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಇವರು ಸರ್ವವರನ್ನು ವಂದಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ರಮೇಶ ಎಸ್. ಬೆಳಗಾವಿ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಉಪಸ್ಥಿತರಿದ್ದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.